ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ರಾಜೋತ್ಸವ 

ಶಿವಮೊಗ್ಗ : ಕನ್ನಡ ಸಿನಿಮಾ ರಂಗ ಅಂದ್ರೆ ಮೊದಲು ನೆನಪಾಗುವ ಹೆಸರು ಡಾ.ರಾಜ್‌ಕುಮಾರ್. ರೀಲ್‌ನಲ್ಲಿ ಮಾತ್ರವಲ್ಲ ರಿಯಲ್ ಜೀವನದಲ್ಲಿಯೂ ಸರಳತೆಯ ಹೀರೋವಾಗಿ ಮಿಂಚಿದವರು. ಅವರು ನಮ್ಮೊಟ್ಟಿಗಿಲ್ಲವಾದರೂ ಅವರ ಜೀವನ ಶೈಲಿಯೇ ನಮಗೆಲ್ಲ ಸ್ಪೂರ್ತಿ.

ಇಂಥಹ ಮಹಾನ್ ನಾಯಕ ನಟನ ಜನ್ಮ ದಿನಾಚರಣೆ ಏಪ್ರಿಲ್ ೨೪ ರಂದು ನಡೆಯಲಿದೆ. ಈ ಹಿನ್ನೆಲೆ ಇಂದಿನಿಂದ 8 ದಿನಗಳ ವರೆಗೆ ಪ್ರತಿದಿನ ರಾತ್ರಿ 8.30 ರಿಂದ 9 ಗಂಟೆಯವರೆಗೆ ರಾಜೋತ್ಸವ ಎನ್ನುವ ವಿಶೇಷ ಕಾರ್ಯಕ್ರಮ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿವಮೊಗ್ಗದ ಗಾಯಕರು, ರಾಜ್ ಅವರ ಪ್ರಸಿದ್ಧ ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಮಿಸ್ ಮಾಡ್ದೆ ನೋಡಿ