ಶಿವಮೊಗ್ಗ: ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಆಗಬೇಕು. ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯಿದೆ ೨೦೦೮ ಜಾರಿಗೆ ತಂದು ೧೩ ವರ್ಷಗಳು ಕಳೆದಿದೆ. ಇದು ಜಾರಿ ಬಂದು ರೈತರಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ೨೦೦೯ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ೩ ಪತ್ರಗಳನ್ನು ಬರೆದಿದ್ದರು. ಕರ್ನಾಟಕದಲ್ಲಿ ಈ ಮಹತ್ವದ ಕಾಯಿದೆ ಜಾರಿ ಮಾಡಿ ೨೦೦೯ರೊಳಗೆ ರೈತರಿಗೆ ಹಕ್ಕುಪತ್ರ ನೀಡಲು ತಿಳಿಸಿದ್ದರು. ಆದರೆ ರಾಜ್ಯ ಸರ್ಕಾರದಿಂದ ೩ ಲಕ್ಷ ಅರ್ಜಿಗಳನ್ನು ಯಾವುದೇ ವಿಚಾರಣೆ ಮಾಡದೆ ವಜಾ ಮಾಡಲಾಯಿತು. ಶಿಕಾರಿಪುರ, ತೀರ್ಥಹಳ್ಳಿ, ಜಿಗಡೆ, ಇಕ್ಕೇರಿಯಲ್ಲಿ ಯಾವುದೇ ರೈತರ ಅರ್ಜಿ ವಜಾ ಮಾಡಬಾರದು. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಒತ್ತಾಯಿಸಿದರು. ನಮ್ಮ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಮಲೆನಾಡು ರೈತರ ಹೋರಾಟ ಸಮಿತಿ ಆಗ್ರಹಪಡಿಸಿತು. ಇಲ್ಲವಾದಲ್ಲಿ ತೀವ್ರ ಹೋರಾಟ ಆರಂಭಿಸಲಾಗುತ್ತದೆ. ಸರ್ಕಾರ ವಿಳಂಬ ಮಾಡಿದ್ದಲ್ಲಿ ಕಾನೂನು ಭಂಗ ಚಳುವಳಿಯನ್ನು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿತು.
.jpg)
.jpg)
.jpg)
.jpg)
.jpg)
.jpg)
