ಶೇಷಾದ್ರಿಪುರನಲ್ಲಿ ನಾಲ್ಕೈದು ಮನೆಗಳು ಕುಸಿತ
ಶಿವಮೊಗ್ಗ : ಎಲ್ಲಾದ್ರೂ ಒಂದು ಸಣ್ಣ ಗುಡಿಸಿಲು ಕಟ್ಟಿಕೊಡಿ.. ಕ್ಯಾಂಟೀನ್ ಮಾಡಿಕೊಂಡು ಇರ್ತೀನಿ.. ಇದ್ದ ಒಂದು ಸೂರು ಹೋಯ್ತು.. ನಾನೇನು ಮಾಡ್ಲಿ.. ಹೀಗೆ ಕಣ್ಣೀರು ಹಾಕುತ್ತಾ ಗೋಳಾಡ್ತಾ ಇರೋದು ಶಿವಮೊಗ್ಗ ನಗರದ ಶೇಷಾದ್ರಿಪುರಂನ ೨ನೇ ಕ್ರಾಸ್‌ನ ಮಹಿಳೆ ರಂಗಮ್ಮ. ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇದ್ದ ಒಂದು ಸೂರು ಸಹ ಕುಸಿದು ಬಿದ್ದಿದೆ. ಅದೃಷ್ಟ ವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೂ ಮನೆ ಕಳೆದುಕೊಂಡ ಮಹಿಳೆ ದಿಕ್ಕು ತೋಚದ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಈ ನಡುವೆ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೊಂದೇ ಮನೆಯಲ್ಲಿ ಶೇಷಾದ್ರಿಪುಂ ಒಂದರಲ್ಲೇ ನಾಲ್ಕೈದು ಮನೆಗಳು ಕುಸಿದು ಹೋಗಿವೆ. ಇರೋದಕ್ಕೆ ಒಂದು ಮನೆ ಕೊಡ್ರಿ ಅಂತ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಕುಡಿಯುವ ನೀರು ಸರಿಯಿಲ್ಲ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.. ನಮ್ಮ ಗೋಳು ಕೇಳೋರು ಯಾರು ಅಂತ ಜನರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.
ಸಂತ್ರಸ್ಥರಿಗೆ ಸಾಂತ್ವಾನ ಹೇಳಿದ ಕೆ.ಈ.ಕಾಂತೇಶ್
ಶಿವಮೊಗ್ಗ : ಮಳೆ ಅಬ್ಬರಕ್ಕೆ ಶೇಷಾದ್ರಿಪುರದಲ್ಲಿ ಮನೆ ಗೋಡೆಗಳು ಕಸಿದು ಬಿದ್ದು ಹಾನಿಯಾಗಿದೆ. ಮನೆ ಕಳೆದುಕೊಂಡಿರುವ ಸಂತ್ರಸ್ಥರು ಏನು ಮಾಡುವುದೆಂದು ತೋಚದೆ ದಿಕ್ಕೆಟ್ಟು ಕೂತ್ತಿದ್ದಾರೆ. ಈ ನಡುವೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಂತ್ರಸ್ಥರಿಗೆ ಸಾಂತ್ವಾನ ಹೇಳಿದ್ರು. ಹಾಗೇನೆ ವೈಯಕ್ತಿಕವಾಗಿ ಧನ ಸಹಾಯ ಮಾಡಿ, ಅಧಿಕಾರಿಗಳಿಗೆ ಕರೆ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ರು.