ದುರ್ಗಿಗುಡಿ ರಥೋತ್ಸವದಲ್ಲಿ ಅಪ್ಪು 

ಶಿವಮೊಗ್ಗ : ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನದಂದು ದುರ್ಗಿಗುಡಿ ರಥೋತ್ಸವ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ದೇವಿಯ ರಥೋತ್ಸವ ಕಾರ್ಯಕ್ರಮ ನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದರು.

ಈ ರಥೋತ್ಸವ ಕಾರ್ಯಕ್ರಮ ಆಚರಿಸಿದ ಮೇಲೆಯೇ ಇಲ್ಲಿ ಹೋಳಿ ಹಬ್ಬ ಆಚರಿಸಿವುದು ವಾಡಿಕೆಯಾಗಿದೆ. ಈ ವೇಳೆ ಅಪ್ಪು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಯಿತು.