ಖಾಸಗಿ ಬಸ್ ಮಾಲೀಕರ ಸಾವಿನ ಸುತ್ತ ಅನುಮಾನದ ಹುತ್ತ 

ಹೊಸನಗರ : ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶವ ಪತ್ತೆಯಾಗಿದ್ದು, ಇವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶನಿವಾರ ಪಟುಗುಪ್ಪ ಸೇತುವೆ ಬಳಿ ಶೋಧ ಕಾರ್ಯ ನಡೆಯುತ್ತಿದ್ದಾಗ ಅಲ್ಲಿಗೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಅವರು, ಇಲ್ಲಿ ಅವರನ್ನ ಯಾರದಾರು ಹೊಡೆದು ಹಾಕಿದ್ದಾರಾ ಅಥವಾ ಅವರೇ ಹಾರಿ ಬಿದ್ದಿದ್ದಾರಾ ಎಂಬುದು ನಿಮ್ಮ ಆತಂಕ. ಪ್ರಕಾಶ್ ಅವರದ್ದು ಯಾವುದೋ ಒಂದು ಬಸ್ಸಿನ ವ್ಯವಹಾರ ಇತ್ತು. ಅವರು ಎಲ್ಲೆಲ್ಲಿ ಎಷ್ಟೊತ್ತಿಗೆ ಓಡಾಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದರು. ಶಾಸಕರ ಈ ಮಾತುಗಳು ಇದೀಗ ಪ್ರಕಾಶ್ ಅವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.