ಅಮರಣಾಂತ ಉಪವಾಸ ಸತ್ಯಗ್ರಹ ನಡೆಸುತ್ತೇವೆ 

ಶಿವಮೊಗ್ಗ : ನಾವು ನೀಡದ್ದ ಗಡವು ಮೀರಿದೆ, ಆದರೂ ಕೂಡ ಸರ್ಕಾರ ಕ್ರಮ ಕೈಗೊಂಡಿಲ್ಲ ಆದ್ದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಮರಣಾಂತ ಉಪವಾಸ ಸತ್ಯಗ್ರಹ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ ಎಚ್ಚರಿಸಿದ್ದಾರೆ.

ಹಕ್ಕಿಪಿಕ್ಕಿ ಜನಾಂಗ ವಾಸವಾಗಿರುವ ಅಂಬೇಡ್ಕರ್ ನಗರಕ್ಕೆ ಮೂಲಸೌಕರ್ಯ ಕಲ್ಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಮಾತನಾಡಿದ ಅವರು, ಹಕ್ಕಿಪಿಕ್ಕಿ ಜನಾಂಗದವರು ಹಲವು ವರ್ಷಗಳಿಂದ ಯಾವುದೇ ಸೌಕರ್ಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅವರಿಗೆ  ವಿದ್ಯುತ್ ಸಂಪರ್ಕ ಕಲ್ಪಿಸಿಬೇಕು. ಸೂರು ನಿರ್ಮಿಸಿ ಕೊಡಬೇಕು. ಹಾಗೂ ಈ ಪ್ರದೇಶವನ್ನು ಸ್ಲಂ ಪ್ರದೇಶವೇಂದು ಘೋಷಿಸಬೇಕು. ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.