ಶಿವಮೊಗ್ಗ : ಡಿಸೆಂಬರ್ ೩೧ಕ್ಕೆ ಬಂದ್ ಮಾಡಲೇ ಬೇಕು. ಅದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಓಡಾಡುತ್ತಿದ್ದೇವೆ. ಇಡೀ ನಾಡಿನ ಕನ್ನಡಿಗರ ಬಂದ್. ನಾಡಿನ ಪ್ರೇಮವನ್ನು ಕೇಂದ್ರ ಸರಕಾರಕ್ಕೆ ತೋರಿಸುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಎಂಇಎಸ್ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯ್ತು. ಈ ಪ್ರತಿಭಟನೆಯಲ್ಲಿ ಪ್ರವೀಣ್ ಶೆಟ್ಟಿ ಪಾಲ್ಗೊಂಡು, ಎಂಇಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ರು. ಡಿಸೆಂಬರ್ ೩೧ರಂದು ಕರೆ ನೀಡಿರುವ ಬಂದ್, ಕನ್ನಡಿಗರ ಬಂದ್.. ಸಂಪೂರ್ಣ ಬಂದ್ ಆಗಲೇ ಬೇಕು ಎಂದು ಅವರು ಹೇಳಿದ್ರು.