ಶಿವಮೊಗ್ಗ : ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಾಯಣ ಗುರುಗಳ ಮೂರ್ತಿಯಿರುವ ಸ್ಥಬ್ದ ಚಿತ್ರವನ್ನ ಕೇಂದ್ರ ಗಣರಾಜ್ಯೋತ್ಸವ ಆಯ್ಕೆ ಸಮತಿ ನಿರಾಕರಿಸಿದೆ. ಸಮಿತಿಯ ಈ ನಿರ್ಣಯವನ್ನ ಖಂಡಿಸಿ ನಾರಾಯಣಗುರು ವಿಚಾರ ವೇದಿಕೆಯವರು ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರು.
ನಾರಾಯಣ ಗುರುಗಳು ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದ ಶೋಷಿತ ವರ್ಗಗಳನ್ನ ಮೇಲೆತ್ತಿದ್ದವರು. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಠಾಗೂರ್ ಕೂಡ ನಾರಾಯಣ ಗುರುಗಳ ಪ್ರಭಾವಕ್ಕೆ ಒಳಗಾಗಿ ಪ್ರೇರಣೆ ಪಡೆದವರು. ಇಂಥಹ ಮಹನೀಯರ ಸ್ಥಬ್ದ ಚಿತ್ರವೊಂದನ್ನ ಕೇರಳ ಸರ್ಕಾರ ಗಣರಾಜ್ಯೋತ್ಸವ ಪರೇಡ್ ಆಯ್ಕೆಗೆ ಕಳುಹಿಸಿತ್ತು. ಆದ್ರೆ, ಆಯ್ಕೆ ಸಮಿತಿಯು ಈ ಸ್ಥಬ್ದ ಚಿತ್ರವನ್ನ ನಿರಾಕರಿಸಿದೆ.
ಸಮಿತಿಯ ಈ ನಿರ್ಧಾರ ತಿಳುವಳಿಕೆಯಿಲ್ಲದ ಅಜ್ಞಾನದ ಪರಮಾವಧಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.