ಮನೆ ಕಳೆದುಕೊಂಡ ಮಹಿಳೆಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ

ಶಿವಮೊಗ್ಗ : ಭಾರಿ ಮಳೆಯಿಂದಾಗಿ ಮನೆ ಕಳೆದುಕೊಂಡ ಇಂದ್ರಮ್ಮ ಎಂಬ ಮಹಿಳೆಯ ಮನೆಗೆ ಸಂತೋಷ್ ಗುರೂಜಿ ಭೇಟಿ ನೀಡಿ ಮನೆ ಪುನರ್ ನಿರ್ಮಾಣಕ್ಕೆ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಶಿವಮೊಗದಲ್ಲಿ ದಾನಿಗಳಿಗೇನು ಕಡಿಮೆ ಇಲ್ಲ. ಆದ್ರೆ ಅವರಿಗೆ ಸ್ಪೂರ್ತಿ ತುಂಬುವ ಕೆಲಸವಾಗಬೇಕು ಅಷ್ಟೆ. ಈಗಿರುವ ಮನೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಶ್ರಾವಣದ ಮೊದಲ ವಾರದಲ್ಲಿಯೇ ಮನೆಗೆ ಗುದ್ದಲಿ ಪೂಜೆ ಮಾಡಲಾಗುವುದು. ವಿದ್ವತ್ ಭಾರತ ಟ್ರಸ್ಟ್ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆ. ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು ಎಂದರು. ಅಂದ್ಹಾಗೆ ಸೋಮಿನಕೊಪ್ಪದಲ್ಲಿ ಮಸೀದಿಗೆ ಹೋಗುವ ರಸ್ತೆಯಲ್ಲಿ ಇಂದ್ರಮ್ಮಕೃಷ್ಣೋಜಿ ರಾವ್ ಮನೆಯ ಮೇಲೆ ಮೇ ೧೯ರಂದು ಸುರಿದ ಮಳೆಯಿಂದಾಗಿ ತೆಂಗಿನಮರವೊಂದು ಬಿದ್ದು ಮನೆಗೆ ಹಾನಿಯಾಗಿತ್ತು.

ನಂಬಿಕೆ ದ್ರೋಹ ಮಾಡಿದ್ದಾರೆ

ಚಂದ್ರಶೇಖರ ಗುರೂಜಿ ಕೊಲೆಗೆ ಸಂತೋಶ್ ಗುರೂಜಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನೊಂದು ತಿಂಗಳಲ್ಲಿಯೇ ಅವರನ್ನು ಮರಣ ದಂಡನೆಗೆ ಒಳಪಡಿಸಬೇಕು. ಚಂದ್ರಶೇಖರ್ ಗುರೂಜಿ ಅವರ ಸಂಸ್ಥೆಯಲ್ಲೇ ಕೆಲಸಕ್ಕಿದ್ದು, ನಂಬಿಕೆದ್ರೋಹ ಮಾಡಿದ್ದಾರೆ. ಆಸ್ತಿಗಾಗಿ ಕ್ರೂರವಾಗಿ ಕೊಂದಿದ್ದಾರೆ. ಇಂತಹ ಘಟನೆ ನಡೆಯದಂತೆ ಸಾರ್ವಜನಿಕ ವ್ಯಕ್ತಿಗಳಿಗೆ ಹಾಗೂ ಸ್ವಾಮೀಜಿಗಳಿಗೆ ರಕ್ಷಣೆ ನೀಡುವ ಅಗತ್ಯವಿದೆ ಎಂದರು.