ಶಿವಮೊಗ್ಗ : ಜನವರಿ ೨ರಂದು ಮಲೆನಾಡು ಮುದ್ರಕರ ಸಂಘದಿಂದ ಮುದ್ರಕರ ಹಬ್ಬ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮಲೆನಾಡು ಮುದ್ರಕ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್. ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಮುದ್ರಕರ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆಹಿರಿಯ ಮುದ್ರಕರಿಗೆ ಅಭಿನಂದನೆಗಳನ್ನ ಕೂಡ ಸಲ್ಲಿಸಲಾಗಿವುದು. ಕಾರ್ಯಕ್ರಮದ ಅಂಗವಾಗಿ ಸಂಜೆ ೫ ಗಂಟೆಗೆ ಜಾದೂಗಾರ್ ಪ್ರಶಾಂತ್‌ರಿಂದ ವಿಶಿಷ್ಟವಾದ ಜಾದೂ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜನವರಿ ೨ರಂದು ಮುದ್ರಕರ ಹಬ್ಬ
