ಪತ್ರಕರ್ತರ ಮಿತ್ರ ಆದರ್ಶ ಈಗ ನೆನಪು ಮಾತ್ರ 

ಶಿವಮೊಗ್ಗ : ಶಿವಮೊಗ್ಗ ಪತ್ರಕರ್ತರ ಮಿತ್ರ ಆದರ್ಶ ಈಗ ನೆನಪು ಮಾತ್ರ. ಹಲವಾರು ವರ್ಷಗಳಿಂದ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ, ಆದರ್ಶ ಕಳೆದ ರಾತ್ರಿ ಅಕಾಲಿಕ ಮರಣ ಹೊಂದಿದ್ದಾನೆ.

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆದರ್ಶ, ಈಗ ನಮ್ಮೆಲ್ಲರನ್ನು ಬಿಟ್ಟು ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ. ಆದರ್ಶನ ನಿಧನಕ್ಕೆ ಪತ್ರಕರ್ತರು ಸಂತಾಪ ಸೂಚನೆ ಮಾಡಿದ್ದಾರೆ. ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲೂ ಸಂತಾಪ ನಡೆಸಿ, ಆದರ್ಶನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.