ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಭಾವಿ ಸಭೆ

ಶಿವಮೊಗ್ಗ : ನೇರ ಪಾವತಿ ಕಾರ್ಮಿಕರು, ಕಸದ ವಾಹನ ಚಾಲಕರು, ಒಳಚರಂಡಿ ವಿಭಾಗದ ನೌಕರರು, ಲೋಡರ್‍ಸ್ ಹಾಗೂ ಹೆಲ್ಪರ್‍ಸ್ ನೌಕರರನ್ನು ಖಾಯಂಗೊಳಿಸುಂವತೆ ಆಗ್ರಹಿಸಿ ಹೋರಾಟ ನಡೆಸಲು ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮುಂದಾಗಿದೆ.

ಜುಲೈ 1 ರಿಂದ ಈ ವಿಚಾರವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಂಘ ಸಿದ್ಧತೆ ನಡೆಸ್ತಾಯಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ಮಹಾಸಂಘದ ರಾಜ್ಯಾಧ್ಯಕ್ಷ ಮೈಸೂರ್ ನಾರಾಯಣ್ ನೇತೃತ್ವದಲ್ಲಿ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.

ಹೊನ್ನಸಿರಿ ಆರ್ಕೇಡ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಪ್ರಮುಖರು ಹಾಗೂ ಉಡುಪಿ, ಚಿಕ್ಕಮಗಳೂರು, ಮಂಗಳೂರು, ಕಾರವಾರ, ಹಾಸನ ಜಿಲ್ಲೆಗಳ ಮುಖಂಡರು ಹಾಜರಾಗಿದ್ದರು.