ಕೊಲೆಯ ಹಿಂದಿರುವ ಇಸ್ಲಾಮಿಕ್ ಶಕ್ತಿಯನ್ನು ಹದ್ದುಬಸ್ತಿನಲ್ಲಿಡಬೇಕು : ಪ್ರಮೋದ್ ಮತಾಲಿಕ್

ಶಿವಮೊಗ್ಗ : ಹರ್ಷನ ಕೊಲೆಯನ್ನು ಯಾರೋ ಸಾಮಾನ್ಯರು ಮಾಡಿಲ್ಲ. ಕೊಲೆಯ ಕುರಿತು ತರಬೇತಿ ತೆಗೆದುಕೊಂಡವರೇ ಈ ಕೃತ್ಯ ಮಾಡಿದ್ದಾರೆ. ಇಂತವರನ್ನು ಎನ್‌ಕೌಂಟರ್ ಮಾಡಿ ಎಂದು ಶ್ರೀರಾಮ್ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಹತ್ಯೆಯಾದ ಬಜರಂಗ ದಳ ಕಾರ್ಯಕರ್ತ ಹರ್ಷ ಮನೆಗೆ ಭೇಟಿ ಕುಟುಂದವರಿಗೆ ಸಾಂತ್ವಾನ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಹರ್ಷ ಹಾಗೂ ಕೊಲೆ ಮಾಡಿದವರ ನಡೆವೆ ಮೊದಲೇ ದ್ವೇಶವಿತ್ತು ಎಂದು ಈ ಪ್ರಕರಣವನ್ನು ಮುಚ್ಚಿ ಹಾಕುವ ಹಾಗಿಲ್ಲ. ಹತ್ಯೆಯಲ್ಲಿ ಭಾಗಿಯಾದ ಹುಡುಗರ ಹಿಂದೆ ಒಂದು ಇಸ್ಲಾಮಿಕ್ ಶಕ್ತಿಯಿದೆ. ಆ ಶಕ್ತಿಯನ್ನ ಹುಡುಕಿ ಹದ್ದುಬಸ್ತಿನಲ್ಲಿ ಇಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.