ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ತಯಾರಿ 

ಹೈಲೆಟ್ಸ್ :

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ತಯಾರಿ 
ಸಾವಿರಾರು ಪೊಲೀಸ್ ಸಿಬ್ಬಂದಿ ನಿಯೋಜನೆ 
೧೯ ಡಿವೈಎಸ್ಪಿ, ೪೬ ಇನ್ಸ್‌ಪೆಕ್ಟರ್, ೭೧ ಸಬ್‌ಇನ್ಸ್‌ಪೆಕ್ಟರ್ 
೧ ಆರ್‌ಎಎಫ್, ೧೫ ಕೆಎಸ್‌ಆರ್‌ಪಿ, ೧೫ ಡಿಎಆರ್ ತುಕಡಿ 

ಶಿವಮೊಗ್ಗ : ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈಗಾಲೇ ಹಿಂದೂ ಮಹಾಸಭಾದವರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಮೆರವಣಿಗೆ ಹಿನ್ನೆಲೆಯಲ್ಲಿ ಈಗಾಗಲೇ ಮಾರ್ಗ ಬದಲಾವಣೆಗೆ ಡಿಸಿ ಡಾ. ಸೆಲ್ವಮಣಿ ಆದೇಶ ಮಾಡಿದ್ದಾರೆ. ಇಬ್ಬರು ಎಎಸ್ಪಿ, ೧೯ ಡಿವೈಎಸ್ಪಿ, ೪೬ ಇನ್ಸ್‌ಪೆಕ್ಟರ್, ೭೧ ಸಬ್‌ಇನ್ಸ್‌ಪೆಕ್ಟರ್, ೧೯೭೦ ಪೊಲೀಸ್ ಸಿಬ್ಬಂದಿ, ೭೦೦ ಹೋಮ್ ಗಾರ್ಡ್, ಒಂದು ಆರ್‌ಎಎಫ್ ತುಕಡಿ, ೧೫ ಕೆಎಸ್‌ಆರ್‌ಪಿ, ೧೫ ಡಿಎಆರ್ ತುಕಡಿಯನ್ನು ಭಧ್ರತೆಗಾಗಿ ನಿಯೋಜನೆ ಮಾಡಲಾಗಿದೆ.