ಶಿವಮೊಗ್ಗ : ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಮಾಧಕ ವಸ್ತುಗಳ ವಿರುದ್ಧ ಯುದ್ಧದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾಧಕ ವಸ್ತು ಮಾರಾಟ ಹಾಗೂ ಸೇವನೆ ಕುರಿತಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಗೃಹ ಸಚಿವರು, ಇತ್ತೀಜೆಗಷ್ಟೆ ಆಂಧ್ರಪ್ರದೇಶದ ವಿಶಾಖ ಪಟ್ಟಣಂನಿಂದ ಜಿಲ್ಲೆಗೆ ಸರಬರಾಜಾಗುತ್ತಿದ್ದ ಗಾಂಜವನ್ನ ಶಿವಮೊಗ್ಗ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ನಮ್ಮ ಪೊಲೀಸರ ಒತ್ತಡದಿಂದ ಆಂಧ್ರ ಸರ್ಕಾರ ವಿಶಾಕ ಪಟ್ಟಣಂನ ವಿವಿಧೆಡೆ ಗಾಂಜಾ ವಶಪಡಿಸಿಕೊಂಡು ಸುಟ್ಟು ಹಾಕಿದೆ ಎಂದು ಹೇಳಿದರು.