ಆಟ ಆಡುತ್ತಿರುವ ಪೊಲೀಸರು

ಶಿವಮೊಗ್ಗ : ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿ.ಆರ್. ಮೈದಾನದಲ್ಲಿ ಪೊಲೀಸರಿಗಾಗಿ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪೊಲೀಸರ ಕುರಿತಾಗಿ ನನಗೆ ವಿಶೇಷವಾದ ಗೌರವವಿದೆ. ಒತ್ತಡಗಳ ನಡುವೆ ಕೆಲಸ ಮಾಡುವ ಪೊಲೀಸರಿಗೆ ಇಂಥಹ ಕ್ರೀಡೆಗಳು  ಫಿಟ್‌ನೆಸ್ ಹಾಗೂ ರಿಲ್ಯಾಕ್ಸ್ ನೀಡುತ್ತವೆ ಎಂದು ಹೇಳಿದರು. ಕ್ರೀಡಾಕೂಟದಲ್ಲಿ ವಿವಿಧ ರೀತಿಯ ಕ್ರೀಡೆಗಳನ್ನ ಆಡಿಸಾಗ್ತಾಯಿದೆ. ಡಿಸೆಂಬರ್ ೧೮ ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು ಪೂರ್ವ ವಲಯದ ಪೊಲೀಸ್ ಮಹಾನಿರ್ದೇಶಕ ರವಿ.ಎಸ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.