ಶಿವಮೊಗ್ಗ : ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಯೊಂದು ನಡೆದಿದೆ. ಫೆಬ್ರವರಿ ೨೦ ರಂದು ಹರ್ಷನ ಹತ್ಯೆಗೆ ಬಳಸಿದ್ದ ಕಾರು ಪತ್ತೆ ಆಗಿದೆ.
ಪೊಲೀಸರಿಂದ CG 13 C 4496 ನೋಂದಣಿ ಕಾರು ಜಪ್ತಿ ಮಾಡಲಾಗಿದೆ. ಹರ್ಷನನ್ನು ಹತ್ಯೆ ಮಾಡಲು ಇದೇ ಕಾರಿನ್ನು ದುಷ್ಕರ್ಮಿಗಳು ಬಳಸಿದ್ದರು. ಕಾರಿನಲ್ಲಿ ಬಂದ ಹಂತಕರು ಹರ್ಷ ಹಲ್ಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳಿ ಸಿಕ್ಕಿದ್ದರು ಕೂಡ ಹತ್ಯೆಗೆ ಬಳಸಿದ ಕಾರ್ ಸಿಕ್ಕಿರಲಿಲ್ಲ. ಇದೀಗ ಕಾರು ಕೂಡ ಸಿಕ್ಕಿದ್ದು ಪ್ರಕರಣದ ತನಿಖೆಗೆ ಮತ್ತಷ್ಟು ಬಲ ಬಂದಂತಾಗಿದೆ.