ಒಬ್ಬ ಅಂದರ್ ಇನ್ನಿಬ್ಬರು ಪರಾರಿ

ಭದ್ರಾವತಿ : ಕೈಯಿಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಮೂವರು ಕಳ್ಳರ ಪರಿಸ್ಥಿತಿ. ಹೌದು ಹೊಸಮನೆ ಠಾಣಾ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಮೂರು ಜನ ಕಳ್ಳರು ಕಳ್ಳತನದಿಂದ ತಂದಿರುವ ಮೊಬೈಲ್ ಫೋನ್‌ಗಳನ್ನು  ಹಂಚಿಕೊಳ್ಳುತ್ತಿದ್ದರು.

ಈ ವೇಳೆ ಪೊಲೀಸರು ದಾಳಿ ಮಾಡಿದಾಗ ಭದ್ರವಾತಿ ಅನ್ವರ್ ಕಾಲೋನಿಯ ೨೫ ವರ್ಷದ ಸಯ್ಯದ್ ಅಲ್ವಿ ಪೊಲೀಸರ ಅತಿಥಿಯಾಗಿದ್ದು ಇನ್ನಿಬ್ಬರು ತಪ್ಪಿಕೊಂಡಿದ್ದಾರೆ. ಭದ್ರವಾತಿ ಟೌನ್‌ನ ಪ್ರಭಾರ ಡಿವೈಎಸ್‌ಪಿ ಡಿಸೆಂಬರ್ ೩೦ರಂದು ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿಯ ಮೇರಿಗೆ ದಾಳಿ ಮಾಡಿದ್ದಾರೆ. ಆರೋಪಿಯಿಂದ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿ ತಂದಿದ್ದ ಅಂದಾಜು ೬ ಲಕ್ಷದ ೬೮ ಸಾವಿರದ ೪೦೦ರೂಪಾಯಿ ಮೌಲ್ಯದ ವಿವಿಧ ಕಂಪನಿಯ ೫೫ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.