ಗ್ರಾಹಕರ ಜೇಬಿಗೆ ನಿತ್ಯ ಕತ್ತರಿ..! 

ಶಿವಮೊಗ್ಗ : ಪೆಟ್ರೋಲ್, ಡೀಸೆಲ್ ರೇಟ್ ದಿನೇ ದಿನೇ ಏರಿಕೆಯಾಗುತ್ತಾ ಸಾಗಿದೆ. ಪಂಚ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾದರೂ ದೇಶದಲ್ಲಿ ಮಾತ್ರ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗಿತ್ತು.

ಇದೀಗ ಪ್ರತಿನಿತ್ಯವೂ ಲೀಟರ್‌ಗೆ 80 ಪೈಸೆ, 1 ರೂಪಾಯಿ  ಏರಿಕೆಯಾಗುತ್ತಲೇ ಇದೆ. ಶಿವಮೊಗ್ಗದಲ್ಲಿ ಲೀಟರ್ ಪೆಟ್ರೋಲ್‌ಗೆ 105.38 ರೂಪಾಯಿ ಇದೆ. ಇನ್ನು ಡೀಸೆಲ್‌ಗೆ 89.35 ರೂಪಾಯಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಈಗಲೇ ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿರುವ ಬಡ ಮತ್ತು ಮಧ್ಯಮ ವರ್ಗದವರ ಬದುಕು ಮತ್ತಷ್ಟು ದುಸ್ಥರವಾಗಲಿದೆ.