ಶಿವಮೊಗ್ಗದಲ್ಲೂ ಗಗನದತ್ತ ಮುಖ ಮಾಡಿದ ಪೆಟ್ರೋಲ್-ಡೀಸೆಲ್ ದರ

ಶಿವಮೊಗ್ಗ: ಪೈಸೆ ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಕಳೆದ ೧೦ ದಿನಗಳಿಂದ ದರ ಏರಿಕೆಯಾಗುತ್ತಲೇ ಇದೆ. ಸೆಪ್ಟೆಂಬರ್ ೨೭ರವರೆಗೆ ಸ್ಥಿರವಾಗಿದ್ದ ತೈಲ ದರ ಸೆಪ್ಟೆಂಬರ್ ನಾಗಾಲೋಟ ಮುಂದುವರೆಸಿದೆ.

ಶಿವಮೊಗ್ಗದಲ್ಲಿ ಸೆಪ್ಟೆಂಬರ್ ೨೭ರಂದು ೧೦೬ ರೂಪಾಯಿ, ೧೯ ಪೈಸೆ ಇದ್ದ ಪೆಟ್ರೋಲ್ ದರ ಇಂದು ೧೦೮ ರೂಪಾಯಿ, ೨೭ ಪೈಸೆ ಆಗಿದೆ. ಅದೇ ರೀತಿ ೯೬ ರೂಪಾಯಿ ೩ ಪೈಸೆ ಇದ್ದ ಡೀಸೆಲ್ ದರ ಇಂದು ೯೮ ರೂಪಾಯಿ ೬೪ ಪೈಸೆ ಆಗಿದೆ. ಒಟ್ಟಾರೆ ಕಳೆದ ೧೦ ದಿನಗಳಲ್ಲಿ ಪೆಟ್ರೋಲ್ ದರ ೨.೦೮ ರೂಪಾಯಿ ಏರಿಕೆ ಕಂಡ್ರೆ, ಡೀಸೆಲ್ ದರ ೨.೬೧ ರೂಪಾಯಿ ಏರಿಕೆಯಾಗಿದೆ.