ಜಲ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ 

ಶಿವಮೊಗ್ಗ : ಬಿಲ್ ನೋಡಿ ಜನರು ಆತಂಕ ವ್ಯಕ್ತಪಡಿಸ್ತಾ ಇದಾರೆ. ಆದ್ರೆ, ಜಲ ಮಂಡಳಿಯವರು ತಲೆ ಕೆಡಿಸಿಕೊಂಡಿಲ್ಲ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನ ರಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲ ಮಂಡಳಿಯವರು ಮೀಟರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡ್ತಾ ಇಲ್ಲ. ಜನರು ಕಾರ್ಪೋರೇಟರ್‌ಗಳ ಬಳಿ ಬಂದು ನಿತ್ಯ ಗೋಳು ತೋಡಿಕೊಳ್ತಾ ಇದಾರೆ. ಯೋಜನೆ ಬಂತು ಅನ್ನೋ ಖುಷಿಯ ಬದಲು ಬಿಲ್ ನೋಡಿ ಜನರು ಭಯ ಬೀಳುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.