ಎರಡೂ ಕಡೆಯಿಂದ ಹೊಂದಾಣಿಕೆಯಾಗಬೇಕು : ಪೇಜಾವರ ಶ್ರೀ 

ಶಿವಮೊಗ್ಗ : ಈ ವೇಳೆ ದೇಶದಲ್ಲಿ ನಡೆಯುತ್ತಿರು ಕೋಮು ಗಲಭೆಗಳನ್ನು ಪೇಜಾವರದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಮ, ಹನುಮ ಹುಟ್ಟಿದ ನಾಡಿನಲ್ಲಿ, ಬಹುಸಂಖ್ಯಾತರಾಗಿರುವ ಹಿಂದೂಗಳ ಉತ್ಸವಕ್ಕೆ ಈ ರೀತಿಯ ವಿರೋಧ ಒಳ್ಳೆಯದಲ್ಲ.

ಇಂಥಹ ಘಟನೆಗಳು ನಡೆಯುತ್ತಿರುವಾಗ ಸೌರ್ಹಾದತೆಯ ಮಾತುಗಳನ್ನು ಆಡಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಒಬ್ಬರು ಸದಾ ಕಾಲ ತಗ್ಗುವುದು. ಇನ್ನೊಬ್ಬರು ಸದಾ ವಿರೋಧ ವ್ಯಕ್ತಪಡಿಸುತ್ತಾ ಹೋದರೆ ಶಾಂತಿ ಹೇಗೆ ನೆಲಸುತ್ತದೆ. ಬದಲಾವಣೆಗಳು ಒಂದೇ ಬದಿಯಿಂದ ಆಗಬಾರದು. ಎರಡೂ ಕಡೆಯಿಂದ ಹೊಂದಾಣಿಕೆಯಾದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದರು.