ಕಾಂಗ್ರೆಸ್ ವಿರುದ್ಧ ಪಾಲಿಕೆ ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಆಕ್ರೋಶ

ಶಿವಮೊಗ್ಗ : ಈ ಮೊದಲು ದೇಶದಲ್ಲಿ ಯಾವುದು ಸತ್ಯ ಎಂದು ಹೇಳಲು ಯೋಗ್ಯವಾಗಿಲ್ಲವೋ ಅದನ್ನ ಪಠ್ಯದಲ್ಲಿ ಬಿಂಬಿಸಲಾಗಿತ್ತು. ಆದ್ರೀಗ ಚರಿತ್ರೆಯ ಶ್ರೇಷ್ಠತೆಯನ್ನು ರೋಹಿತ್ ಚಕ್ರತೀರ್ಥರ ಸಮಿತಿ ಎತ್ತಿ ಹಿಡಿದಿದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತೀಯ ಸಂಸ್ಕೃತಿಯ ವಿರೋಧವಾದ ಮತ್ತು ಎಡ ಪಂಥೀಯ ಪರವಾದ ಇತಿಹಾಸವನ್ನ ಪಠ್ಯಪುಸ್ತಕದಲ್ಲಿ ತರಲಾಗಿತ್ತು. ದೇಶದಲ್ಲಿ ಅಟ್ಟಹಾಸ ಮೆರೆದವರನ್ನು ವೈಭವೀಕರಿಸಲಾಗಿತ್ತು.

ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲು ಸುಳ್ಳು ಹೇಳಿಕೊಂಡೇ ಬಂದಿದೆ. ನೂರು ಬಾರಿ ಸುಳ್ಳು ಹೇಳಿ ಅದನ್ನೆ ನಿಜ ಎಂದು ಬಿಂಬಿಸಲಾಗಿದೆ. ಈಗ ಬಿಜೆಪಿ ಪಠ್ಯ ಪರಿಷ್ಕರಿಸಿದರೆ ಅದನ್ನು ಕೇಸರೀಕರಣ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.