ಓವರ್ ಬ್ರಿಡ್ಜ್ ಕಾಮಗಾರಿ ಆರಂಭ : ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಡಿಸಿ ಸೂಚನೆ 

ಭದ್ರಾವತಿ : ಕೊನೆಗೂ ಹಲವು ದಿನಗಳ ಜನರ ಬೇಡಿಕೆಯ ನಂತರ ಶಿವಮೊಗ್ಗ- ಭದ್ರಾವತಿ ನಡುವಿನ ಎಲ್‌ಸಿ ನಂನರ್ ೩೪ರಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಓಡಾಡುವ ವಾಹನಗಳು ಕಾಮಗಾರಿ ಪೂರ್ಣವಾಗುವವರೆಗೂ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದ್ದಾರೆ.

ಹೀಗಾಗಿ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಿಳಿಕಿ ಕ್ರಾಸ್ - ಕೃಷ್ಣಪ್ಪ ವೃತ್ತದ ಮುಖಾಂತರ ಭದ್ರಾವತಿಗೆ ಹೋಗಬೇಕು. ಹಾಗೂ ಭದ್ರಾತಿಯಿಂದ ಶಿವಮೊಗ್ಗ ಕಡೆಗೆ ಸಂಚಾರ ಮಾಡುವ ವಾಹನಗಳು, ಅಂಡರ್‌ಬ್ರಿಡ್ಜ್- ಉಂಬ್ಳೇಬೈಲ್ ರಸ್ತೆ, ಕೃಷ್ಣಪ್ಪ ವೃತ್ತ- ರಾಷ್ಟ್ರೀಯ ಹೆದ್ದಾರಿ-೬೯ರ ಮುಖಾಂತರ ಶಿವಮೊಗ್ಗಕ್ಕೆ ತಲುಪಬೇಕು. ಈ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.