ಶಿವಮೊಗ್ಗ : ಕೆನೆರಾ ಬ್ಯಾಂಕ್ ಕಸ್ಟಮರ್ ಕೇರ್‌ನಿಂದ ಕರೆ ಮಾಡ್ತಾ ಇದ್ದೀವಿ. ನಿಮ್ಮ ಮೊಬೈಲ್‌ಗೆ ಒಟಿಪಿ ಬಂದಿದೆ ಅದನ್ನು ತಿಳಿಸಿ ಅಂತ ಹೇಳಿ ಬಳಿಕ 1 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.
ಊರುಗಡೂರಿನ ನಾಗರಾಜ್ ಎಂಬುವರೇ ಮೋಸ ಹೋದವರು. ಕೈವೈಸಿ ಬ್ಲಾಕ್ ಆಗಿದೆ, ರಿನಿವಲ್‌ಗೆ ಒಟಿಪಿ ಬೇಕು ಅಂತ ಹೇಳಿ ಕ್ಷಣಾರ್ಧದಲ್ಲೇ ಒಂದು ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ. ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.