ಪುರದಾಳು : ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಘಟಕ 1 ಹಾಗೂ ಘಟಕ 2ರ ವಾರ್ಷಿಕ ಶಿಬಿರವನ್ನು ಪುರದಾಳು ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಸೋಮವಾರ ರಾತ್ರಿ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಪಡೆಯಲು ಎಲ್ಲಾ ಶಿಬಿರಾರ್ಥಿಗಳು ದೀಪವನ್ನು ಬೆಳಗಿದರು. ಒಂದು ತಂಡ ದೀಪವನ್ನು ಬೆಳಗುವಾಗ ಇನ್ನೊಂದು ತಂಡ ದೇಶ ಭಕ್ತಿಗೀತೆಯನ್ನು ಹಾಡಿ ಶಿಬಿರಾರ್ಥಿಗಳ ಗಮನವನ್ನು ಒಂದೆಡೆಗೆ ಸೆಳೆದರು.
ಕಾರ್ಯಕ್ರಮದಲ್ಲಿ ಕ್ರಾಯಕ್ರಮಾಧಿಕಾರಿ ಡಾ. ಹಾ.ಮಾ.ನಾಗುರ್ಜುನ್, ಘಟಕ ೨ರ ಅಧಿಕಾರಿ ಡಾ.ವೆಂಕಟೇಶ್, ಸಹ ಪ್ರಾಧ್ಯಾಪಕರಾದ ನೈದಿಲೆ, ಸುಧಾ, ಪುರದಾಳು ಗ್ರಾಮಪಂಚಾಯತ್ ಸದಸ್ಯರಾದ ಮಾನಸ ಸತೀಶ್, ಪ್ರದೀಪ್.ಎಸ್.ಹೆಬ್ಬಾರ್ ಸೇರಿದಂತೆ ಶಿಭಿರಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.