ಕೇಂದ್ರ ಬಜೆಟ್ : ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ 

ದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್‌ಅನ್ನು ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದರು. ಸುಮಾರು 1 ಗಂಟೆ 33 ನಿಮಿಷಗಳ ಕಾಲ ಅವರು ಬಜೆಟ್ ಭಾಷಣ ಓದಿದರು. ಈ ಬಾರಿ ನಿರೀಕ್ಷೆಯಂತೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೆ, ಯಥಾಸ್ಥಿತಿ ಮುದುವರೆಸಲಾಗಿದೆ.

ಡಿಜಿಟಲ್ ಕರೆನ್ಸಿ ಚಲಾವಣೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೇ ಕೃಷಿ ಕ್ಷೇತ್ರದಲ್ಲೂ ಅಮೂಲಾಗ್ರ ಬದಲಾವಣೆ ತರಲು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆ, ಚಪ್ಪಲಿ, ಚಿನ್ನ, ವಜ್ರಾಭರಣಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು ೪೦೦ ಒಂದೇ ಭಾರತ್ ರೈಲುಗಳನ್ನು ಬಿಡಲು ಕೇಂದ್ರ ತೀರ್ಮಾನಿಸಿದೆ.