9 ಜನ ಮರಳಿ ಮಾತೃ ಧರ್ಮಕ್ಕೆ

ಭದ್ರಾವತಿ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಅಂತರಗಂಗೆ ಗ್ರಾಮದ ಒಂದೇ ಕುಟುಂಬದ 9 ಜನ ಮರಳಿ ಮಾತೃ ಧರ್ಮಕ್ಕೆ ಸೇರಿದ್ದಾರೆ. ಜಯಶೀಲನ್, ಪ್ರಭಾಕರನ್, ಲಲಿತಾ ಪ್ರಭಾಕರನ್, ಭರತ್ ಕುಮಾರ್, ಭಾವನಾ, ಪ್ರಕಾಶ್ ಹಾಗೂ ಶ್ವೇತಾ ಪ್ರಕಾಶ್ ಹಾಗೂ ಪೃಥ್ವಿ ಎಂಬ ಒಂದೇ ಕುಟುಂಬದ ಸದಸ್ಯರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಭದ್ರಾವತಿಯ ಜನ್ನಾಪುರ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಹಾಗೂ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಹಿಂದೂ ಧರ್ಮವನ್ನು ಮರಳಿ ಸ್ವೀಕರಿಸಿದ್ದಾರೆ. ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್.ಶಿವಕುಮಾರ್, ವೈಎಸ್.ರಾಮಮೂರ್ತಿ, ಎಸ್.ನಾರಾಯಣ್, ಪಿ.ಮಂಜುನಾಥ್ ರಾವ್, ಶೈಲೇಶ್ ಕೋಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.