ಶಿವಮೊಗ್ಗ : ಸರ್ಕಾರಿ ಶಾಲೆಗಳೆಂದರೆ ಸರ್ಕಾರಕ್ಕೇನೆ ಯಾಕಷ್ಟು ನಿರ್ಲಕ್ಷವೋ ಗೊತ್ತಿಲ್ಲ. ಅವುಗಳ ಅಭಿವೃದ್ಧಿ ಮಾಡಲು ಹಿಂದೂ ಮುಂದೂ ಯೋಚನೆ ಮಾಡ್ತಾಯಿದೆ. ಸರ್ಕಾರದ ಈ ಅಸಡ್ಡೆಗೆ ಬಡ ಮಕ್ಕಳು ಓದಲು ಕೂಡ ಕಷ್ಟ ಪಡುವಂತಾಗಿದೆ. ಸರಕಾರಿ ಶಾಲೆಗೆ ಯಾಕೆ ಹೋಗಬೇಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗದ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಟ್ಟಡಗಳು ಶಿಥಿಲಗೊಂಡು ವರ್ಷಗಳೇ ಉರುಳಿ ಹೋಗಿವೆ.
೫ ಕೋಠಡಿಗಳಲ್ಲಿ ಪಾಠ ಮಾಡೋದಕ್ಕೆ ಬರೋದಿಲ್ಲ. ಆದರೂ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಮಕ್ಕಳು ಸೋರುವ ಕಟ್ಟಡದಲ್ಲಿ, ಇಲಿ ಹೆಗ್ಗಣಗಳು ಸತ್ತ ವಾಸನೆಯಲ್ಲಿ ತರಗತಿಯಲ್ಲಿ ಕೂತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಶಾಲೆ ಉಳಿಸುತ್ತೇವೆ ಅಂತ ಬಡಿಕೊಳ್ಳುವರು ನೋಡಲೇ ಬೇಕಾದ ಸ್ಟೋರಿ ಇದು. ಬಿಲ್ಡಿಂಗ್ ಡೆಮಾಲಿಷ್ ಮಾಡಬೇಕೆಂದು ಆದೇಶ ಹೊರಡಿಸಿ ಒಂದು ವರ್ಷವಾಯ್ತು ಇದುವರೆಗೂ ಡೆಮಾಲಿಷ್ ಮಾಡಿಲ್ಲ, ಹೊಸ ಕಟ್ಟಡವನ್ನೂ ಕಟ್ಟಿಲ್ಲ. ಪೋಷಕರು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿದ್ರೆ ಎಲ್ಲಿಗೆ ಪ್ರಾಣಕ್ಕೆ ಕುತ್ತು ಬರುತ್ತೋ ಅನ್ನೋ ಆತಂಕ ಕೂಡ ಎದುರಾಗಿದೆ. ಅಧಿಕಾರಿಗಳು ಮಾತ್ರ ಹಾಗೆ ಮಾಡುತ್ತೇವೆ. ಕಟ್ಟಡ ಕಟ್ಟುತ್ತೇವೆ ಅಂತ ಹೇಳಿಕೊಂಡು ಟೈಮ್ ಪಾಸ್ ಮಾಡ್ತಾ ಇರೋದು ದುರಂತವೇ ಸರಿ.