ಹೊನ್ನಾಳಿ : ಹೊನ್ನಾಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉಪವಿಭಾಗಾಧಿಕಾರಿಗಳ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಂದಾಯ ಸಚಿವ ಆರ್. ಅಶೋಕ್, ಸಚಿವ ಬೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು.
ಹೊನ್ನಾಳಿ ಕ್ಷೇತ್ರದ ಗಡಿಯಲ್ಲಿರುವ ಚಿನ್ನಿಕಟ್ಟೆ, ಜಯನಗರ, ಸಾಸ್ವೆಹಳ್ಳಿಯ ಜನರು ಎಸಿ ಕಚೇರಿಗಾಗಿ ದಾವಣಗೆರೆಗೆ ಹೋಗಬೇಕಿತ್ತು. ಹೀಗಾಗಿ ಅಲ್ಲಿನ ಜನರಿಗೆ ಬಹಳ ಸಮಸ್ಯೆಯಾಗಿತ್ತು. ಇದೀಗ ಹೊಸದಾಗಿ ಹೊನ್ನಾಳಿಯಲ್ಲಿಯೇ ಕಚೇರಿ ಆರಂಭದಿಂದಾಗಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ.