ಶಿವಮೊಗ್ಗ : ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ನಾರಾಯಣಗುರು ಅವರ ಟ್ಯಾಬ್ಲೋವನ್ನ ತಿರಸ್ಕರಿಸಿಸುವುದನ್ನ ಖಂಡಿಸಿ ಗಣರಾಜ್ಯ ದಿನಾಚರಣೆಯ ದಿನದಂದೇ ಶಿವಮೊಗ್ಗ ನಾರಾಯಣಗುರು ವಿಚಾರ ವೇದಿಕೆ, ನಾರಾಯಣಗುರುಗಳ ಮೂರ್ತಿಯಿರುವ ವಾಹನದ ಮೂಲಕ ಅಮೀರ್ ಅಹಮದ್ ಸರ್ಕಲ್‌ನಿಂದ, ಈಡಿಗರ ಭವನಕ್ಕೆ ಸ್ವಾಭಿಮಾನದ ನಡಿಗೆ ಮಾಡಿದೆ.
ಈ ಕುರಿತಾಗಿ ಮಾತನಾಡಿದ ಪ್ರವೀಣ್ ಹಿರೆಹೇಗೋಡು, ನಾರಾಯಣಗುರುಗಳ ಸ್ತಬ್ಧಚಿತ್ರವನ್ನ ನಿರಾಕರಿಸಿರುವ ಕೇಂದ್ರ ರಕ್ಷಣಾ ಸಚಿವಾಲಯವು, ದಲಿತ ಸಮಾಜಕ್ಕೆ ಹಾಗೂ ಶೋಷಿತ ವರ್ಗದವರಿಗೆ ಹಾಗೂ ನಾರಾಯಣಗುರುಗಳಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.