ಡಿಸೆಂಬರ್ ೩ಕ್ಕೆ ಡಿಕೆಶಿ, ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಆಗಮನ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಪರ ಪ್ರಚಾರ ಮಾಡಲು ಡಿಸೆಂಬರ್ ೩ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ನವುಲೆಯಲ್ಲಿರುವ ಸರ್ಜಿ ಕನ್ವೆಂಷನಲ್ ಹಾಲ್‌ನಲ್ಲಿ ವೇದಿಕೆ ರೆಡಿ ಮಾಡಲಾಗಿದೆ. ಜನಪ್ರತಿನಿಧಿಗಳ ಸಭೆ ಇದಾಗಿದ್ದು, ಉಭಯ ನಾಯಕರು ಪ್ರಚಾರ ಕಾರ್ಯ ನಡೆಸಲಿದ್ದಾರೆ. ಡಿಸೆಂಬರ್ ೧೦ಕ್ಕೆ ಮತದಾನ ಪ್ರಕ್ರಿಯೆ ನಡಯಲಿದ್ದು, ಪ್ರಚಾರ ಕಾರ್ಯ ರಂಗೇರಿದೆ. ಉಭಯ ನಾಯಕರು ಪ್ರಚಾರಕ್ಕೆ ಮತ್ತಷ್ಟು ರಂಗು ನೀಡಲಿದ್ದಾರೆ.