ವಿಜಯನಗರ ಜಿಲ್ಲೆ ಆರಂಭಕ್ಕೆ ಶುಭ ಹಾರೈಸಿದ ಸಚಿವ ಕೆ.ಎಸ್.ಈಶ್ವರಪ್ಪ 

ಶಿವಮೊಗ್ಗ: ವಿಜಯನಗರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಆರಂಭ ಆಗ್ತಿರೋದು ತುಂಬಾ ಸಂತದ ವಿಷಯ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು.

ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ವಿಜಯನಗರ ಅಂತಿದ್ದ ಹಾಗೆ ಕರ್ನಾಟಕ ರಾಜ್ಯದ ಪುರಾತನ ಸಂಸ್ಕೃತಿ, ಗತವೈಭವ ನೆನಪಾಗುತ್ತದೆ. ಜಿಲ್ಲೆಯ ನಾಮಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಮಾಡಿದ ಪ್ರಯತ್ನಕ್ಕೆ ನಾವೆಲ್ಲರೂ ಅವರಿಗೆ ಅಭಿನಂದನೆ ಹೇಳ್ಬೇಕು. ವಿಜಯನಗರ ಜಿಲ್ಲೆಯ ಎಲ್ಲಾ ನಗರಿಕರಿಗೆ ಬರುವಂತಹ ದಿನ ಅಭಿವೃದ್ಧಿ ದಿಕ್ಕಿನಲ್ಲಿ ಸಾಗಲಿ. ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.