ಶಿವಮೊಗ್ಗ : ಎಲ್ಲಾ ಸರ್ಕಾರಗಳು ಕೇವಲ ಸುಳ್ಳು ಭರವಸೆಯನ್ನು ನೀಡುತ್ತಿವೆ. ಇದನ್ನ ಬಿಟ್ಟು, ಭದ್ರಾವತಿ ವಿಎಸ್‌ಐಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ಮಾಡಬೇಕು. ಇದರ ಜವಬ್ದಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಹಿಸಿಕೊಳ್ಳಬೇಕು.
ಬಗರ್ ಹುಕುಂ ಜಾಗವನ್ನು ನಿಜವಾದ ಬಡ ರೈತರಿಗೆ ನೀಡಬೇಕು. ಭದ್ರಾವತಿ ತಾಲೂಕು ಕಚೇರಿಯಲ್ಲಿನ ಮಧ್ಯವರ್ತಿಗಳ ಹಾವಳಿಯಿಂದ ಜನರನ್ನು ಕಾಪಾಡಬೇಕೆಂದು ಆಗ್ರಹಿಸಿ ಮಾನವ ಹಕ್ಕು ಹೋರಾಟ ಸಮಿತಿ ನ್ಯಾಯಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿತ್ತು. ಸೋಮವಾರ ಭದ್ರಾವತಿಯಿಂದ ಪಾದಯಾತ್ರೆ ಆರಂಭಗಿತ್ತು. ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪಾದಯಾತ್ರೆ ಅಂತ್ಯವಾಗಿದೆ.