ಶಿವಮೊಗ್ಗ : 2019ರ ನವೆಂಬರ್ ೬ರಂದು ಅಂಗಡಿ ಎದುರು ವಾಹನಗಳನ್ನ ನಿಲ್ಲಿಸುವುದರಿಂದ ವ್ಯಾಪಾರ ಸರಿಯಾಗಿ ಆಗ್ತಾಯಿಲ್ಲ ಎಂಬ ಕಾರಣಕ್ಕೆ ಇಬ್ಬರು ವ್ಯಾಪಾರಿಗಳ ನಡುವೆ ಆರಂಭವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿತ್ತು. ಇದೀಗ ಈ ಪ್ರಕರಣದ ಆರೋಪಿಗೆ ಐಪಿಸಿ ಕಲಂ 302ರ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆ ಆರೋಪಿ ಜಾವಿದ್ ಬೇಗ್‌ಗೆ ಶಿವಮೊಗ್ಗದ ಪ್ರಿನ್ಸಿಪಲ್ ಡಿಸ್ಟಿಕ್ ಅಂಡ್ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಇದರ ಜೊತೆಗೆ ೫೦ ಸಾವಿರ ದಂಡ ಕಟ್ಟುವಂತೆ ಕೂಡ ಹೇಳಿದ್ದು ಇದರಲ್ಲಿ 45 ಸಾವಿರ ರೂಪಾಯಿಗಳನ್ನ ಕೊಲೆಯಾದ ವ್ಯಾಪಾರಿ ಸೈಯದ್ ಜಾಫರ್ ಮುಲ್ಲಾ ಕುಟುಂಬಕ್ಕೆ ನೀಡುವಂತೆ ಹಾಗೂ ಈ ದಂಡವನ್ನ ಕಟ್ಟದಿದಲ್ಲಿ 6 ತಿಂಗಳ ಹೆಚುವರಿ ಶಿಕ್ಷೆ ಅನುಭವಿಸುವಂತೆ ಕೋರ್ಟ್ ತೀರ್ಪು ನೀಡೆದೆ.
ಅಂದ್ಹಾಗೆ 26 ವರ್ಷದ ಸೈಯದ್ ಜಾಫರ್ ಮುಲ್ಲಾ ಶಿರಾಳಕೊಪ್ಪದ ಶ್ರೀ ಜಯಕರ್ನಾಟಕ ರೈಸ್ ಮಿಲ್ ಎದುರು ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ಹಾಕಿಕೊಂಡಿದ್ದ. ಇವನ ಅಂಗಡಿಗೆ ಬರುವ ಗ್ರಾಹಕರು ಜಾವೆದ್ ಬೇಗ್‌ನ ಕುಷನ್ ಅಂಗಡಿಯ ಮುಂಭಾಗ ವಾಹನಗಳನ್ನ ನಿಲ್ಲಿಸುತ್ತಿದ್ದರು. ಈ ಕಾರಣಕ್ಕಾಗಿ ಇವರಿಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಆದ್ರೆ 2019 ನವೆಂಬರ್ 6ರಂದು ಈ ಗಲಾಟೆ ತಾರಕಕ್ಕೇರಿತ್ತು. ಆಗ ಜಾವಿದ್ ಬೇಗ್‌ನು ಸೈಯದ್ ಜಾಫರ್ ಮುಲ್ಲಾ ನೊಂದಿಗೆ ಮತ್ತೆ ಜಗಳ ಮಾಡಿ ತನ್ನ ಬಳಿ ಇದ್ದ ಚಾಕುವಿನಿಂದ ಸೈಯದ್ ಜಾಫರ್ ಮುಲ್ಲಾನ ಹೊಟ್ಟೆ ಎದೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದ.