ಜನ ಬದಾಲವಣೆ ಬಯಸ್ತಾ ಇದಾರೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ಪ್ರಸನ್‌ಕುಮಾರ್ ಗೆಲುವು ನಿಶ್ಚಿತವಾಗಿದ್ದು, ಅವರ ಈ ಹಿಂದಿನ ಕೆಲಸವೇ ಚುನಾವಣೆ ಗೆಲುವಿಗೆ ದಿಕ್ಸೂಚಿಯಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಬದಲಾವಣೆಯನ್ನ ಬಯಸ್ತಾ ಇದ್ದಾರೆ. ಸುಳ್ಳು ಹೇಳಿ ಅಧಿಕಾರ ಹಿಡಿದಿವರಿಗೆ ತಕ್ಕ ಪಾಠ ಕಲಿಸಲಿಸಲಿದ್ದಾರೆ. ಇದು ಹಾನಗಲ್ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಗಾಮ್ರ ಪಂಚಾಯಿತಿ ಹಣವನ್ನ ಸರ್ಕಾರ ನಿರ್ಧರಿಸುವುದಾದರೆ ಗಾಮ್ರ ಪಂಚಾಯಿತಿ ಯಾಕೆ ಬೇಕು?. ನನ್ನ ಅವಧಿಯಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ದರು. ಆ ಸಮಯದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅತೀ ಹೆಚ್ಚು ಮನೆ ಕಟ್ಟಿಸಿದ್ದೇವೆ. ಆದರೆ ಇವತ್ತು ಒಂದು ಮನೆ ಕಟ್ಟಲಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಕ್ರಿಯಾ ಯೋಜನೆ ಮಾಡಿ ಹಣ ಬಿಡುಗಡೆ ಮಾಡಬೇಕು. ಆದರೆ ಕ್ರಿಯಾಯೋಜನೆಯನ್ನೂ ಸರ್ಕಾರ ಮಾಡುತ್ತದೆ. ಹಣವನ್ನ ಮಾತ್ರ ಗ್ರಾಮ ಪಂಚಾಯಿತಿಯಿoದ ಕೊಡಿಸುತ್ತದೆ. ಹೀಗಾದರೆ ಗ್ರಾಮ ಪಂಚಾಯಿತಿ ಸದಸ್ಯರು ಯಾಕೆ ಬೇಕು ಎಂದು ಪ್ರಶ್ನಿಸಿದರು.