ನನ್ನ ಗೆಲುವಿಗೆ ಯಾವುದೇ ಅಡಚಣೆ ಇಲ್ಲ

ಶಿವಮೊಗ್ಗ : ಇಷ್ಟು ದಿನ ನಾನು ಇಷ್ಟು ಮತ ಬರುತ್ತೆ, ಅಷ್ಟು ಮತ ಬರುತ್ತೆ ಎಂದು ಹೇಳ್ತಾಯಿದ್ದೆ. ಆದ್ರೆ ಈಗ ನನ್ನ ಗೆಲುವಿಗೆ ಯಾವುದೇ ಅಡಚಣೆ ಇಲ್ಲ. ಈ ಚುನಾವಣೆಯಲ್ಲಿ ನನಗೆ ಗೆಲುವ ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣೆ ನನಗೆ ಅಷ್ಟು ದುಬಾರಿ ಎನಿಸಲಿಲ್ಲ. ಬಿಜೆಪಿ ಮತಗಳನ್ನ ನಾನು ಕಿತ್ತುಕೊಳ್ಳುವುದೇನಿಲ್ಲ. ಅವರಲ್ಲಿ ಅಸಮಾಧಾನ ಇದ್ದವರು ನನಗೆ ಮತ ಹಾಕಿದ್ದಾರೆ. ಈ ರೀತಿಯಾಗಿ 15ರಿಂದ 20 ಪರ್ಸೆಂಟ್ ಮತ ನನಗೆ ಬಂದಿರಬಹುದು. ಅಲ್ಲದೆ ಜೆಡಿಎಸ್‌ನ ಬೆಂಬಲ ಕೂಡ ನನಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.