ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿನ ಮಾನ್ಯ ಎಂಬ ಹೆಸರಿನ ಹೆಣ್ಣು ಸಿಂಹವು ಸೋಮವಾರ ಮೃತಪಟ್ಟಿದೆ. ಈ ಮೂಲಕ ಸಿಂಹಧಾಮದಲ್ಲಿನ ಸಿಂಹಗಳ ಸಂಖ್ಯೆ 5ಕ್ಕೆ ಇಳಿದಿದೆ.
ಒಂದು ವಾರದ ಹಿಂದೆ, ಗಂಡು ಸಿಂಹ ಯಶವಂತನ ಜೊತೆ, ಮಾನ್ಯ ಎಂಬ ಹೆಸರಿನ ಸಿಂಹಿಣಿಯನ್ನ ಬಿಡಲಾಗಿತ್ತು. ಆಗ ನಡೆದ ಸಂಘರ್ಷದಲ್ಲಿ ಸಿಂಹಿಣಿ ಗಾಯಗೊಂಡಿದೆ. ನಂತರ ಎರಡನ್ನೂ ಬೇರ್ಪಡಿಸಿ ಇಡಲಾಗಿತ್ತು. ಆದ್ರೆ ಸಿಂಹಿಣಿ ಮಾನ್ಯಾಗೆ ತೀವ್ರತರವಾದ ಪೆಟ್ಟು ಬಿದ್ದಿದ್ದರಿಂದ ಗುಣಮುಖವಾಗದೆ ಮೃತಪಟ್ಟಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಹುಲಿ-ಸಿಂಹಧಾಮದ ಕಾರ್ಯನಿರ್ವಾವಾಹಕ ನಿರ್ದೇಶಕ ಮುಕುಂದ್ ಚಂದ್, ಹೆಣ್ಣು ಸಿಂಹದ ಸಾವಿನ ಬಗ್ಗೆ ಕಾನೂನು ರೀತಿಯಾಗಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಂತರ ಆ ಸಿಂಹಿಣಿಯ ದೇಹವನ್ನು ವಿಲೇ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.