ಸಾಗರ : ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನಧಿಕೃತವಾಗಿ ವ್ಯಾಪಕ ಪ್ರಮಾಣದಲ್ಲಿ ಲಿಂಗನಮಕ್ಕಿಯಿಂದ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ ಮಾಡಿದ್ದಾರೆ.
ತುಮರಿ ಸೇತುವೆ ನಿರ್ಮಾಣ ಕಾಮಗಾರಿಗೆ ನೀರಿನ ಪ್ರಮಾಣ ಕಡಿಮೆ ಬೇಕು ಎಂಬುದನ್ನೇ ನೆಪವಾಗಿಟ್ಟುಕೊಂಡು ಲಿಂಗನಮಕ್ಕಿ ಜಲಾಶಯದ ನೀರನ್ನು ಬೇರೆಡೆಗೆ ಹರಿಸಲಾಗುತ್ತಿದೆ. ಇದರ ಲಾಭ ಖಾಸಗಿ ವಿದ್ಯುತ್ ಘಟಕಗಳಿಗೆ ದೊರಕುತ್ತದೆ. ಶಾಸಕ ಹರತಾಳು ಹಾಲಪ್ಪ ಇದರಲ್ಲಿ ಶಾಮೀಲಾಗಿದ್ದಾರೆ. ಅಲ್ಲದೆ ಕಮಿಷನ್‌ಗಾಗಿ ಕೆಪಿಸಿ ಕಚೇರಿಯ ಮುಂದೆ ಧರಣಿ ನಡೆಸಿದ್ದರು ಎಂದು ಬೇಳೂರು ಗಂಭೀರ ಆರೋಪ ಮಾಡಿದ್ದಾರೆ.