ಮುಳುಗಡೆ ಸಂತ್ರಸ್ತರ ಮೀಸಲು ಜಮೀನೇ ಮುಳುಗಡೆ! ?

ಶಿವಮೊಗ್ಗ : ಆಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಳುಗಡೆ ಸಂತ್ರಸ್ತರಿಗಾಗಿ ಮೀಸಲಿಟ್ಟ ಜಮಿನನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಾಯಿದೆ ಎಂದು ಕರ್ನಾಟಕ ಮಾನವ ಸಂರಕ್ಷಣಾ ಹಾಗೂ ಪ್ರಜಾ ಸೇವಾ ಸಮಿತಿ ಆರೋಪಿಸಿ ಪ್ರತಿಭಟನೆ ನಡೆಸಿದೆ.

ಆಗಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ 167 ರ ಪೈಕಿ ಸುಮಾರು 2033 ಎಕರೆ 30 ಗುಂಟೆ ಜಮೀನನ್ನು ಸರ್ಕಾರವು ಮುಳುಗಡೆ ಸಂತ್ರಸ್ತರಿಗೆ ಎಂದು ಮೀಸಲಿಟ್ಟಿದೆ. ಆದರೆ ಅನೇಕ ತಿಂಗಳುಗಳಿಂದ ಕೆಲ ದುಷ್ಕರ್ಮಿಗಳು ಸರ್ಕಾರಕ್ಕೆ ಸಂಬಂಧಪಟ್ಟ ಎಕ್ಕರಗಟ್ಟೆಲೆ ಜಮೀನನ್ನು ಸಾರ್ವಜನಿಕರಿಗೆ ಅಗ್ರಿಮೆಂಟ್ ಮೂಲಕ ಮಾರಾಟ ಮಾಡಿಕೊಂಡಿದ್ದಾರೆ. ಈ ಮೂಲಕ ಮುಳುಗಡೆ ಸಂತ್ರಸ್ತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿಲಾಗಿದೆ. ಈ ಸಂಬಂಧ ಅಲ್ಲಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರವನ್ನ ಹಲವಾರು ಬಾರಿ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಸಮಿತಿಯಿಂದ ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.