ಶಿವಮೊಗ್ಗ : ಡಿಸೆಂಬರ್ ೧೨ ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಧ್ಯಕ್ಷ ಸ್ಥಾನದ ಚುನಾವಣೆಗೆ ಆರ್. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪ್ರ ಸಮಾಜದ ಮಾತೃ ಸಂಸ್ಥೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಸುಮಾರು ೫೦ ವರ್ಷಗಳ ಇತಿಹಾಸವಿದೆ. ವಿಪ್ರ ಸಮಜದ ಅಭಿವೃದ್ಧಿಗಾಗಿ ನಾನು ಹಲವಾರು ಯೋಜನೆಗಳನ್ನ ಹಾಕಿಕೊಂಡಿದ್ದು, ಇವುಗಳ ಅನುಷ್ಠಾನ ಆಗಬೇಕಿದೆ. ಹಾಗೂ ಇಂದಿನ ಯುವಕರು ಹಾಗೂ ಮಹಿಳೆಯರನ್ನ ಸಮುದಾಯದ ಮುಖ್ಯವಾಹಿನಿಗೆ ಕರೆತರಬೇಕಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರು ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಆರ್. ಲಕ್ಷ್ಮೀಕಾಂತ್ ಮತಯಾಚನೆ
