ಶಂಕರಘಟ್ಟ : ಕುವೆಂಪು ವಿವಿಯ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೆಳನ ಆಯೋಜಿಸಿದೆ. ಅಳಿವಿನಂಚಿನಲ್ಲಿರುವ ಸಮುದಾಯಗಳು ಹಾಗೂ ಸಾಮಾಜಿಕ ನ್ಯಾಯದ ಕುರಿತು ಈ ಸಮ್ಮೇಳನ ನಡೆಯುತ್ತಿದೆ.
ಪದ್ಮಶ್ರೀ ಪುರಸ್ಕೃತೆ ಮಾತೆ ಮಂಜಮ್ಮ ಜೋಗತಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಗೌರವ ಕೊಡಬೇಕು. ಸಂವಿಧಾನದ ಕನಸು ನನಸಾಗಬೇಕು. ನಮಗೋಸ್ಕರ ನಾವು ಬದುಕಬೇಕು. ಬದುಕುವ ದಾರಿ ಸರಿಯಾಗಿರಬೇಕು. ಯಾರ ಭಯನೂ ನಮಗೆ ಇರಬಾರದು. ಗುರಿ ತಲುಪುವ ಕೆಲಸವನ್ನು ಎಲ್ಲರೂ ಮಾಡಿ. ಆ ಮೂಲಕ ನೀವೂ ಕೂಡ ಪದ್ಮಶ್ರೀ ಪ್ರಶಸ್ತಿ ಪಡೆಯಿರಿ. ನಮ್ಮವರು ವಿವಿಗೆ ಬಂದ್ರೆ ಓದಲು ಅವಕಾಶ ಮಾಡಿಕೊಡಿ ಎಂದರು. ಕುವೆಂಪು ವಿವಿ ಕುಲಪತಿ ಪ್ರೋ.ಬಿ.ಪಿ.ವೀರಭದ್ರಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು.