ವರದಿ ಸಲ್ಲಿಸಲು ದ್ವಿ ಸದಸ್ಯ ಸಮಿತಿ ರಚನೆ 

ಶಂಕರಘಟ್ಟ : ಪರೀಕ್ಷೆಯಿಲ್ಲದೆ ದೂರ ಶಿಕ್ಷಣ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದ್ದ ಕುವೆಂಪು ವಿವಿ ನಿರ್ಧಾರ ತೀವ್ರ ವಿವಾದವನ್ನು ಸೃಷ್ಟಿಸಿತ್ತು. ಇದೀಗ ಈ ವಿಚಾರವನ್ನು ಪರಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ದ್ವಿಸದಸ್ಯ ಸಮಿತಿ ರಚಿಸಿದೆ.

ಸಮಿತಿಯು ಮಾರ್ಚ್ ೨೬ರಿಂದ ಕಾರ್ಯನಿರ್ವಹಿಸಲಿದೆ. ಈ ಹಿನ್ನೆಲೆ ಉನ್ನತ ಶಿಕ್ಷಣ ಪರಿಷತ್ ಕಾರ್ಯವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಷಿ, ಬೆಂಗಳೂರು ನಗರ ವಿವಿ ಕುಲಸಚಿವ ಶ್ರೀಧರ್ ನೇತೃತ್ವದ ತಂಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ.