ಶಿವಮೊಗ್ಗ : ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ೨೦೨೨-೨೩ ನೇ ಸಾಲಿನ ಕ್ರೀಡಾಕೂಟ ನಡೆಯಿತು. ವಾಲಿಬಾಲ್, ಧ್ರೋಬಾಲ್, ಶಾಟ್‌ಪುಟ್, ಡಿಸ್ಕಸ್ ಧ್ರೋ, ಷಟಲ್ ಬ್ಯಾಡ್ಮಿಂಟನ್, ಚೆಸ್, ಕೇರಂ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಂಗಳವಾರ ಆರಂಭವಾಗಿದ್ದ ಕ್ರೀಡಾಕೂಟವು ಯಶಸ್ವಿಯಾಗಿ ಅಂತ್ಯವಾಗಿದೆ. ಅಂದ್ಹಾಗೆ ಕ್ರೀಡಾಕೂಟಕ್ಕಾಗಿ 6 ತಂಡಗಳನ್ನು ರಚಿಸಲಾಗಿತ್ತು, ಪ್ರತಿ ತಂಡದಲ್ಲಿಯೂ 25 ಪ್ರಶಿಕ್ಷಣಾರ್ಥಿಗಳು ಇದ್ದರು. ಇಬ್ಬರು ಉಪನ್ಯಾಸಕರನ್ನ ತಂಡಗಳ ಉಸ್ತುವಾರಿಗೆ ನೇಮಿಸಲಾಗಿತ್ತು. ಎಲ್ಲಾ ಪ್ರಶಿಕ್ಷಣಾರ್ಥಿಗಳು ಕೂಡ ಬಹಳ ಉತ್ಸುಕರಾಗಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.