ಅಧ್ಯಾಪಕೇತರ ನೌಕರರ ಸಂಘದ ಚುನಾವಣಾ ಫಲಿತಾಂಶ ಘೋಷಣೆ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ೧೫ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ೧೩ ಸಾಮಾನ್ಯ ಹಾಗೂ ೨ ಮಹಿಳಾ ಮೀಸಲು ಸ್ಥಾನಗಳಿಗಾಗಿ ನಡೆದ ಈ ಚುನಾವಣೆಯಲ್ಲಿ ೨೪ ಮಂದಿ ನೌಕರರು ಸ್ಪರ್ಧಿಸಿದ್ದರು.

ಮುಂದಿನ ಮೂರು ವರ್ಷಗಳ ಕಾಲ ಸಂಘಕ್ಕೆ ಇವರು ನಿರ್ದೇಶಕರಾಗಿರಲಿದ್ದಾರೆ. ಸೋಮವಾರ ನಡೆದ ಮತದಾನದಲ್ಲಿ ಶೇಕಡಾ 98ರಷ್ಟು ಮತ ಚಲಾವಣೆಯಾಗಿತ್ತು. ಅಂದ್ಹಾಗೆ ಮುಂದಿನ ವಾರ ಚುನಾಯಿತ ೧೫ ಮಂದಿ ನಿರ್ದೇಶಕರಲ್ಲಿಯೇ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿಯ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.