ತೀರ್ಥಹಳ್ಳಿ : ಯೂನಿವರ್ಸಿಟಿಗಳು ಶಾರದ ಮಂದಿರಗಳು ಅವುಗಳು ಜ್ಞಾನವನ್ನು ಮಾತ್ರ ಕೊಡಬೇಕು. ಅಲ್ಲಿ ಯಾವುದೇ ದ್ವೇಶದ, ಜಗಳದ ವಾತಾವರಣ ಅಲ್ಲಿ ಇರಬಾರದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕುವೆಂಪು ವಿವಿಯಲ್ಲಿನ ಆಂತರಿಕ ಕಲಹಗಳು ಹಾಗೂ ಇತ್ತೀಚೆಗೆ ದೂರಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಾದ ಸಂಘರ್ಷಗಳ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, ಕುವೆಂಪು ವಿವಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲ ಕೂತು ಚರ್ಚೆ ಮಾಡುತ್ತೇವೆ. ಉನ್ನತ ಶಿಕ್ಷಣ ಸಚಿವರು ಕೂಡ ಈ ಬಗ್ಗೆ ಗಮನ ಹರಿಸಿದ್ದಾರೆ. ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.