ಡೀನ್ ಹುದ್ದೆ ಭರ್ತಿಗೆ ಮೀನಾಮೇಷ : ವಿವಾದದ ಸುಳಿಯಲ್ಲಿ ಮತ್ತೆ ಸಿಲುಕಿದ ಕುವೆಂಪು ವಿವಿ

ಶಂಕರಘಟ್ಟ : ಈಗಾಗಲೆ ಹಲವು ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವ ಕುವೆಂಪು ವಿಶ್ವವಿದ್ಯಾಲಯ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಹೌದು, ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯ ಅಥವಾ ಡೀನ್ ಹುದ್ದೆ ತೆರವುಗೊಂಡಿದೆ. ಆದರೆ ಇದುವರೆಗೂ ಈ ಹುದ್ದೆಗೆ ಅರ್ಹರನ್ನ ನಿಯೋಜನೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಂದ್ಹಾಗೆ, ಎರಡು ವರ್ಷಗಳಿಗೆ ಸೀಮಿತವಾದ ಹದ್ದೆಗೆ ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದವರು ಇದ್ದಾರೆ. ಆದರೂ, ಈ ಹುದ್ದೆಯನ್ನ ಭರ್ತಿ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.