ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ 74 ನೇ ಹುಟ್ಟುಹಬ್ಬದ ಹಿನ್ನೆಲೆ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆದುಕೊಂಡರು.
ಶುಕ್ರವಾರ ತಮ್ಮ ಹುಟ್ಟುಹಬ್ಬದ ದಿನದಂದೆ ರಾಜ್ಯಸಭಾ ಚುನಾವಣೆ ಇದ್ದಿದ್ದರಿಂದ ಬೆಂಗಳೂರಿಗೆ ಮತದಾನಕ್ಕೆ ತೆರಳಿದ್ದರು. ಹೀಗಾಗಿ ಶನಿವಾರ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ಈ ವೇಳೆ ಸ್ವತಃ ಈಶ್ವರಪ್ಪನವರೇ ಭಕ್ತರಿಗೆ ಪ್ರಸಾದವನ್ನು ಕೂಡ ವಿತರಿಸಿದರು.
ಇನ್ನು ಕೆಎಸ್‌ಈ ಹುಟ್ಟುಹಬ್ಬದ ಪ್ರಯುಕ್ತ ಬಸವೇಶ್ವರ ನಗರದ ಜೈನ್ ಟೆಂಪಲ್ ಬಳಿಯ ಕಿವುಡು ಮಕ್ಕಳ ತರಂಗ ಶಾಲೆಯಲ್ಲಿಯು ಈಶ್ವರಪ್ಪ ಆಪ್ತರು ಹುಟ್ಟುಹಬ್ಬ ಆಚರಿಸಿದ್ದಾರೆ. ಶಾಲೆಯಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಹಣ್ಣು ವಿತರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೂಡ ಅಧ್ಯಕ್ಷ ಅಧ್ಯಕ್ಷ ನಾಗರಾಜ್, ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಸೇರಿದಂತೆ ಪ್ರಮುಖ ಬಿಜೆಪಿ ಮುಖಂಡರು, ಶಾಲಾ ಸಮಿತಿಯವರು ಉಪಸ್ಥಿತರಿದ್ದರು.