ಈ ಅಗ್ನಿ ಪರೀಕ್ಷೆಯಿಂದ ನಾನು ಹೊರ ಬರ್‍ತೇನೆ : ಈಶ್ವರಪ್ಪ

ಶಿವಮೊಗ್ಗ : ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನಿರ್ಧಾರ, ಅವರ ಆಪ್ತರು ಹಾಗೂ ಪಕ್ಷದ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಈಶ್ವರಪ್ಪ ಸಂಜೆ ಬೆಂಗಳೂರಿಗೆ ಹೋಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆ ಈಶ್ವರಪ್ಪ ತಮ್ಮ ನಿರ್ಧಾರದ ಕುರಿತು ತಮ್ಮ ಆಪ್ತರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ. ಈ ಅಗ್ನಿ ಪರೀಕ್ಷೆಯಿಂದ ನಾನು ಯಶಸ್ವಿಯಾಗಿ ಹೊರ ಬಂದೇ ಬರ್‍ತೇನೆ. ಜೀವ ಇರೋ ತನಕ ಸಂಘಟನೆ ಮೂಲಕ ದೇಶದ ಕೆಲಸವನ್ನ ಹೆಚ್ಚಿಗೆ ಮಾಡೋದಕ್ಕೆ ಈ ಘಟನೆ ನನಗೆ ಅವಕಾಶ ನೀಡಿದೆ ಎಂದು ಈಶ್ವರಪ್ಪ ಹೇಳಿದರು. ಈ ವೇಳೆ ಎಲ್ಲರು ಭಾವುಕರಾಗಿದ್ದರು. ದುಃಖದಿಂದ ಕಣ್ಣೀರು ಸುರಿಸಿದರು.