ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಣೆಬೆನ್ನೂರಿನ ಜೈನ್ ಮಂದಿರದ ಶ್ರೀ ಅಭಿನಂದನ್ ಸಾಗರ ಗುರೂಜಿ ಅವರನ್ನು ಕಿಡ್ನಾಪ್ ಮಾಡುವುದಾಗಿ ಹೇಳಿದ್ದಾರೆ.
ಇದೇನಿದು ಮತ್ತೊಂದು ಹೊಸ ಕಾಂಟ್ರವರ್ಸಿ ಅಂದ್ಕೊಂಡ್ರ, ಹಾಗೇನಿಲ್ಲ. ಈಶ್ವರಪ್ಪ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದು ನೀವು ಶಿವಮೊಗಕ್ಕೆ ಬಂದಿದ್ದೀರ ಎಂದು ಸ್ವಾಮೀಜಯನ್ನ ಕೇಳಿದರು. ಅದಕ್ಕೆ ಸ್ವಾಮೀಜಿ ಇಲ್ಲ ಎಂದಾಗ ನಿಮ್ಮನ್ನ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗ್ತೇವೆ ಎಂದು ಈಶ್ವರಪ್ಪ ನಗೆ ಚಟಾಕಿ ಹಾರಿಸದರು.